ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ, ಪಶ್ಚಿಮ ಘಟ್ಟಗಳ ಅಭೇದ್ಯ ಶಿಖರ ಶ್ರೇಣಿಗಳ ನಡುವೆ, ಭೌಗೋಳಿಕವಾಗಿ ಸುಂದರ ಪ್ರಾಕೃತಿಕ, ಹಚ್ಚ ಹಸುರಿನ ಸಿರಿಯಲ್ಲಿ, ಅಚ್ಚರಿಯ ಸೊಬಗನ್ನು ತನ್ನೊಡಲಲ್ಲಿ ಹೊದೆದು ಮೈದುಂಬಿಸಿಕೊಂಡು, ತನ್ನಿರುವಿಕೆಯನ್ನು ಪ್ರಾಪಂಚಿಕ ಭೂಪಟದಲ್ಲಿ ಗುರುತಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕೇಂದ್ರ ಮಡಂತ್ಯಾರು. ಸರ್ವ ಧರ್ಮೀಯರೊಂದಿಗೆ ಸಹಬಾಳ್ವೆ, ಅನೋನ್ಯತೆ, ಶಾಂತಿ-ಸಾಮರಸ್ಯಕ್ಕೆ ಹೆಸರುವಾಸಿಯಾದ ಈ ಪ್ರದೇಶ, ಮಂಗಳೂರು-ಬೆಳ್ತಂಗಡಿ ಹೆದ್ದಾರಿಯಲ್ಲಿ, ಮಂಗಳೂರಿನಿಂದ 44 ಕಿ.ಮೀ. ದೂರದಲ್ಲಿ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿದೆ.
ಸೇಕ್ರೆಡ್ ಹಾರ್ಟ್ ಧರ್ಮಕೇಂದ್ರ ಸ್ಥಾಪನೆಯಾಗಿ ಇಲ್ಲಿರುವ ವಿದ್ಯಾ ದೇಗುಲಗಳಿಂದ ಉತ್ಕøಷ್ಟ ಗುಣಮಟ್ಟದ ಜ್ಞಾನಾಮೃತವನ್ನು ನೀಡುವುದರ ಮೂಲಕ ಮಡಂತ್ಯಾರು ಚರಿತ್ರೆಯ ಪುಟಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದು ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವವ್ಯಾಪಿ ಪ್ರಸಿದ್ಧಿಯನ್ನು ಪಡೆದಿದೆ.. ..more