ಪವಾಡ ಶಿಲ್ಪದ ಶಕ್ತಿ
1893 ರಲ್ಲಿ ಮಡಂತ್ಯಾರು ನೂತನ ಇಗರ್ಜಿಯ ಕಟ್ಟಡದ ಕೆಲಸ ಪೂರ್ಣಗೊಂಡಾಗ ಇಗರ್ಜಿಯ ಪ್ರಧಾನ ಆರಾಧಾನಾ ಸ್ಥಳದಲ್ಲಿ ಪ್ರಭು ಏಸುಕ್ರೀಸ್ತರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇಗರ್ಜಿಯ ಹೊರಭಾಗದ ಗೋಡೆಯಲ್ಲಿ ಎಲ್ಲರಿಗೂ ಕಾಣುವ ಸ್ಥಳದಲ್ಲಿ ಇದೇ ಪ್ರತಿಮೆಯನ್ನು ಹೋಲುವ ಇನ್ನೊಂದು ಪ್ರತಿಮೆಯನ್ನು ಇರಿಸಬೇಕೆನ್ನುವ ಉದ್ದೇಶದಿಂದ ಪ್ರತಿಮೆಯನ್ನು ಅನಾವರಣಹೊಳಿಸುವ ಸಂಧರ್ಭದಲ್ಲಿ ಈ ಪ್ರತಿಮೆಯನ್ನು ವಿಶೇಷ ಭಾರ ಮತ್ತು ಇರಿಸಿದಾಗ ಆದಂತಹ ತೊಂದರೆಗಳನ್ನು ಗಮನಿಸಿ ಅನಾವರಣಗೊಳಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಈ ಪ್ರತಿಮೆಯನ್ನು ಇಗರ್ಜಿಯ ಹಿಂಭಾಗದ ಗೋದಾಮಿನಲ್ಲಿ ಇಡಲಾಯಿತು. ಸುಮಾರು 90 ವರ್ಷಗಳ ಬಳಿಕ ಅಂದರೆ 1983ರಲ್ಲಿ ಈ ಮೂರ್ತಿಯನ್ನು ಸುಮ್ಮನೆ ಗೋದಾಮಿನಲ್ಲಿ ಇಡುವ ಬದಲು ಇದನ್ನು ತುಂಡು ಮಾಡಿ ಮಣ್ಣಿನ ಅಡಿಗೆ ಹೂಳುವ ಯೋಚನೆ ಬಂದು ಅದನ್ನು ಇಡೆಯುವ ಪ್ರಯತ್ನ ನಡೆಸಿದಾಗ ಈ ಮೂರ್ತಿಯ ಒಂದು ತುಣುಕು ಒಡೆಯಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಅಂದಿನ ಧರ್ಮಗುರುಗಳಾದ ದಿ. ಡಾ. ಫ್ರೆಢ್ ವಿ. ಪಿರೇರಾರವರು ಈ ಮೂರ್ತಿಯಲ್ಲಿ ಅದ್ಭುತ ಶಕ್ತಿ ಇದೆ, ಇದನ್ನು ದಾರ್ಶನಿಕರಿಗೆ ಪೂಜಿಸಲು ಬಹಿರಂಗ ಸ್ಥಳದಲ್ಲಿಡಬೇಕೆಂದು ತೀರ್ಮಾನಿಸಿ ಇಗರ್ಜಿಯ ಮುಂಭಾಗದಲ್ಲಿ ಪ್ರತಿಷ್ಟಾಪನೆಗೊಳಿಸಿದರು. ಇಂದು ಮಡಂತ್ಯಾರಿನ ಕ್ರೈಸ್ತ ಮತ್ತು ಕ್ರೈಸ್ತೇತರ ಬಂಧು ಭಗಿನಿಯರು ಈ ಪ್ರತಿಮೆಯ ಮುಂಬಾಗದಲ್ಲಿ ಪ್ರಾರ್ಥಿಸಿ ಪ್ರಸನ್ನರಾಗಿ ಜೀವನವನ್ನು ಉಜ್ವಲಗೊಳಿಸಿದ ದಾಖಲೆಗಳಿವೆ. ಈ ಪ್ರತಿಮೆಯ ಶಕ್ತಿಯನ್ನು ಮನಗಂಡ ಫಾ. ಲಾರೆನ್ಸ್ ಮಸ್ಕರೇನ್ಹಸ್ರವರು ಇದನ್ನು ಗಾಜಿನ ಪೆಟ್ಟಿಗೆಯೊಳಗೆ ಇಡಲು ಪೂರಕವಾದ ವ್ಯವಸ್ಥೆಗೆ ಸಹಕರಿಸಿದರು.
ನಂತರ ಬಂದ ಪ್ರಧಾನ ದರ್ಮಗುರುಗಳಾಗಿರುವ ಫಾ. ಬೇಜಿಲ್ ವಾಸ್ರವರು 2018ರಲ್ಲಿ ಚರ್ಚಿನ ಶತಮಾನೋತ್ತರ ಬೆಳ್ಳಿ ವರ್ಷದ ಸವಿ ನೆನಪಿಗೆ ಧ್ಯಾನ ಗುಹೆಯುಳ್ಳ ಗೋಪುರವನ್ನು ನಿರ್ಮಿಸಿ ಈ ಪವಾಡ ಶಿಲ್ಪವನ್ನು ಅಲ್ಲಿ ಪ್ರತಿಷ್ಟಾಪಿಸಿದರು. ಮೇ 2ರಂದು ಶತಮಾನೋತ್ತರ ಬೆಳ್ಳಿ ವರ್ಷದ ಆಚರಣೆಯ ಸಂಧರ್ಭದಲ್ಲಿ ಮಂಗಳೂರಿನ ಧರ್ಮಾಧ್ಯಕ್ಷರಿಂದ ಆಶೀವರ್ದಿಸ್ಪಟ್ಟಿತು. ಎಲ್ಲಾ ಕೆಲಸವನ್ನು ನೆರವೇರಿಸಿ 2018ರ ನವೆಂಬರ್ 16ರುಂದು ನೂತನ ಧರ್ಮಾಧ್ಯಕ್ಷರಾದ ವಂದನೀಯ ಪೀಟರ್ ಪಾವ್ಲ್ ಸಲ್ಡಾನರವರಿಂದ ಲೋಕಾರ್ಪಣೆಗೊಂಡಿತು.